ಸಮಾಜದ ಹಲವು ರಂಗಗಳಲ್ಲಿ ವರ್ಕ್ ಫ್ರಮ್ ಹೋಮ್, ಆನ್‌ಲೈನ್ ತರಗತಿಗಳು, ವಿಡಿಯೋ ಕಾನ್ಸರೆನ್ಸ್ ಗಳು ಮುಂತಾದವುಗಳನ್ನು ಉಚಿತ ಮತ್ತು ಸುಲಭವಾಗಿ ಉಪಯೋಗಿಸಬಹುದಾದ ಗೂಗಲ್ ಮೀಟ್ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿತ್ತು. ಇದರಿಂದ ಹಲವು ರಂಗಗಳ ಉದ್ಯೋಗಿಗಳಿಗೆ ಮತ್ತು ಉದ್ಯಮಿಗಳಿಗೆ ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಆಗಿದೆ.
ಗೂಗಲ್ ಮೀಟ್ ಆಪ್ ಅನ್ನು ಉಪಯೋಗಿಸಲು ಇದುವರೆಗೂ ಯಾವುದೇ ಸಮಯದ ಮಿತಿ ಇರಲಿಲ್ಲ.
ಆದರೆ ಇದೀಗ ಗೂಗಲ್ ಕಂಪನಿಯು ಈ ಉಚಿತ ವ್ಯವಸ್ಥೆಯನ್ನು ನಿಯಮಿತ ಗೊಳಿಸುತ್ತಿದೆ.ಅಂದರೆ ಸೆಪ್ಟೆಂಬರ್ 30ರ ಬಳಿಕ ಗೂಗಲ್ ಮೀಟ್ನಲ್ಲಿ ಒಂದು ಗಂಟೆ ಕಾಲ ಮಾತ್ರ ಉಚಿತವಾಗಿ ವಿಡಿಯೋ ಮೀಟ್ ಅನ್ನು ಮಾಡಬಹುದು.ಒಂದು ಗಂಟೆ ನಂತರವೂ ಬಳಕೆ ಮಾಡಬೇಕೆಂದರೆ ಇದಕ್ಕೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಗೂಗಲ್ ಕಂಪನಿ ಹೇಳಿದೆ.
ಇನ್ನು ಮುಂದೆ ಗೂಗಲ್ ಮೀಟ್ ಅನ್ನು ಉಪಯೋಗಿಸುವವರು ತಮ್ಮ ಮೀಟ್ ಗಳನ್ನು ಒಂದು ಗಂಟೆಗೆ ಸೀಮಿತಗೊಳಿಸಿ ಕೊಳ್ಳುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಸೇರಿರಿ.







0 Comments